ಮಹದಾಯಿ ನದಿ ಮತ್ತು ಕಳಸಾ ಬಂಡೂರಿ ಯೋಜನೆ
ಮಹದಾಯಿ ನದಿ ಬಗ್ಗೆ:
● ಮೂಲ: ಮಹಾದಾಯಿ ನದಿಯು ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಭೀಮಗಡ ವನ್ಯಜೀವಿ ಅಭಯಾರಣ್ಯದಿಂದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತದೆ.
● ಈ ನದಿಯು ಪಂಜಿಯಲ್ಲಿ (ಉತ್ತರ-ಗೋವಾ) ಅರೇಬಿಯನ್ ಸಮುದ್ರವನ್ನು ಸೇರುವ ಮೊದಲು ಕರ್ನಾಟಕದಲ್ಲಿ 35 ಕಿ.ಮೀ; ಗೋವಾದಲ್ಲಿ 82 ಕಿ.ಮೀ ಪ್ರಯಾಣಿಸುತ್ತದೆ.
● ಗೋವಾದಲ್ಲಿ ಮಾಂಡೋವಿ ಎಂದೂ ಕರೆಯಲ್ಪಡುವ ಮಹಾದಾಯಿ ಮಳೆಯಾಧಾರಿತ ನದಿಯಾಗಿದ್ದು, ಇದನ್ನು ಕರ್ನಾಟಕ ಮತ್ತು ಗೋವಾ ನಡುವೆ ತಮ್ಮ ನೀರಿನ ಅಗತ್ಯಗಳಿಗಾಗಿ ಹಂಚಿಕೊಳ್ಳಲಾಗುತ್ತದೆ.
● ಸಲೀಮ್ ಅಲಿ ಪಕ್ಷಿಧಾಮವು ಮಾಂಡೋವಿ ನದಿಯ ಚೋರೊ ದ್ವೀಪದಲ್ಲಿದೆ.
● ಪ್ರಮುಖ ಉಪನದಿಗಳು: ಕಳಸಾ ನಾಲಾ, ಬಂಡೂರಿ ನಾಲಾ, ಸುರ್ಲಾ ನಾಲಾ, ಹಲ್ತಾರ್ ನಾಲಾ, ಕಾಂಪಿಟಿಷನ್ ನಾಲಾ, ಮಹಾದಾಯಿ ನಾಲಾ, ಪನ್ಶಿರ್ ನಾಲಾ, ಬೈಲ್ ನಾಲಾ, ಅಂಧರ್ ನಾಲಾ.
ಏನಿದು ಕಳಸಾ-ಬಂಡೂರಿ ಯೋಜನೆ?
● ಈ ಯೋಜನೆಯು ಗೋವಾದಲ್ಲಿರುವ ಮಹಾದಾಯಿ ನದಿಯಿಂದ ಕರ್ನಾಟಕದ ಮಲಪ್ರಭಾ ನದಿ (ಕೃಷ್ಣಾ ನದಿಯ ಉಪನದಿ) ಜಲಾನಯನ ಪ್ರದೇಶಕ್ಕೆ ನೀರನ್ನು ತಿರುಗಿಸಲು ಅಣೆಕಟ್ಟುಗಳು ಮತ್ತು ಕಾಲುವೆ ವ್ಯವಸ್ಥೆಯನ್ನು ಒಳಗೊಂಡಿದೆ.
● ಕರ್ನಾಟಕದ ಬೆಳಗಾವಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವುದು ಯೋಜನೆಯ ಮುಖ್ಯ ಗುರಿಯಾಗಿದೆ.
● ಈ ಯೋಜನೆಯನ್ನು 1980 ರ ದಶಕದಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿತು, ಆದರೆ ಗೋವಾ ರಾಜ್ಯದಿಂದ ವಿರೋಧವನ್ನು ಎದುರಿಸಿತು.
Comments
Post a Comment